ಈ ಸೀಡಿ-ರಾಮ್ ನಲ್ಲಿ ಹಕ್ಕು © ೨೦೦೭ Red Hat, Inc. ಮತ್ತು ಇತರೆ ವಿಷಯಗಳಿವೆ. ವಿತರಣ ನಿಬಂಧನೆಗಳಿಗಾಗಿ ಪ್ರತೀ ಆಕರ ಪ್ಯಾಕೇಜಿನಲ್ಲಿರುವ ಪ್ರತ್ಯೇಕ ಹಕ್ಕು ಸೂಚನೆಗಳನ್ನು ನೋಡಿ. Red Hat, Inc. ನಿಂದ ಕಾಪಿರೈಟಾದ ಉಪಕರಣಗಳ ವಿತರಣಾ ನಿಬಂಧನೆಗಳು EULA ಕಡತದಲ್ಲಿ ಸೂಚಿಸಿದಂತಿವೆ.

Red Hat ಮತ್ತು RPM ಗಳು Red Hat, Inc.ನ ಟ್ರೇಡ್ ಮಾರ್ಕಗಳು


ಕೋಶಗಳ ವ್ಯವಸ್ಥೆ

Red Hat ಎಂಟರ್ಪ್ರೈಸ್ ಲಿನಕ್ಸ್ ಅನ್ನು ಅನುಸ್ಥಾಪನ ಸೀಡಿಗಳು ಮತ್ತು ಸೋರ್ಸ್ ಕೋಡ್ ಸೀಡಿ-ರಾಂಗಳು ಮುಂತಾದ ವಿವಿಧ ಸೀಡಿ-ರಾಂಗಳ ರೂಪದಲ್ಲಿ ನೀಡಲಾಗುವುದು.

ಹೆಚ್ಚಾಗಿ ಎಲ್ಲಾ ಆಧುನಿಕ ಗಣಕಗಳಲ್ಲಿನ ಅನುಸ್ಥಾಪನೆಯಲ್ಲಿ ಪ್ರಥಮ ಅನುಸ್ಥಾಪನ ಸೀಡಿ-ರಾಂನ್ನು ನೇರವಾಗಿ ಬೂಟ್ ಮಾಡಬಹುದು, ಮತ್ತು ಅದು ಈ ಕೆಳಗಿನ ಕೋಶ ರಚನೆಯನ್ನು ಹೊಂದಿರುತ್ತದೆ(ಇಲ್ಲಿ /media/cdrom ವು ಸೀಡಿ-ರಾಂನ ಆರೋಹಣ ತಾಣ):


/media/cdrom
  |----> Server                -- ಕೋರ್ ಪರಿಚಾರಕ ಉತ್ಪನ್ನದ ಬೈನರಿ ಪ್ಯಾಕೇಜುಗಳು
  |        `----> repodata     -- ಅನುಸ್ಥಾಪನ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಟ್ಟ Red Hat
  |                                 Enterprise Linuxನ ಈ ಬಿಡುಗಡೆಯ
  |                                ಬಗೆಗಿನ ಮಾಹಿತಿ
  |----> Cluster               -- ಫೈಲ್ ಓವರ್ ಕ್ಲಸ್ಟರಿಂಗ್ ಹಾಗೂ ಲೋಡ್ ಬ್ಯಾಲೆನ್ಸಿಂಗ್ ನ ಬೈನರಿ ಆಯ್ಕಾ 
  |                               ಪ್ಯಾಕೇಜುಗಳು
  |        `----> repodata     -- ಅನುಸ್ಥಾಪನ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಟ್ಟ ಕ್ಲಸ್ಟರ್ ಬಗೆಗಿನ
  |                               ಮಾಹಿತಿ
  |----> ClusterStorage        -- ಪ್ಯಾರಲಲ್ ಕ್ಲಸ್ಟರ್ಡ್ ಕಡತ ವ್ಯವಸ್ಥೆಯ ಬೈನರಿ ಪ್ಯಾಕೇಜುಗಳು ಮತ್ತು
  |                               ಕ್ಲಸ್ಟರ್ಡ್ ವಾಲ್ಯೂಮ್ ನಿಯಂತ್ರಣ ಆಯ್ಕೆ
  |        `----> repodata     -- ಅನುಸ್ಥಾಪನ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಟ್ಟ ಕ್ಲಸ್ಟರ್ 
  |                               ಸ್ಟೋರೇಜುಗಳ
  |                               ಮಾಹಿತಿಗಳು
  |----> VT                       -- ವಾಸ್ತವೀಕರಣ ಆಯ್ಕೆಗಳಿಗಾಗಿನ ಬೈನರಿ
ಪ್ಯಾಕೇಜುಗಳು
  |        `----> repodata     -- ಅನುಸ್ಥಾಪನೆಯಲ್ಲಿ ಉಪಯೋಗಿಸಲಾದ ವಾಸ್ತವೀಕರಣ ಆಯ್ಕೆಗಳ ಬಗೆಗಿನ
  |                                ಮಾಹಿತಿ
  |----> images                -- ಬೂಟ್ CD-ROM ಚಿತ್ರಿಕೆ
  |----> isolinux              -- CDಯಿಂದ ಬೂಟ್ ಮಾಡಲು ಉಪಯೋಗಿಸಲಾದ ಕಡತಗಳು
  |----> README                -- ಈ ಕಡತ
  |----> RELEASE-NOTES         -- ಈಗ ಬಿಡುಗಡೆಯಾದ Red Hat Enterprise Linux ನ ಬಗೆಗಿನ
  |                                ಮಾಹಿತಿ
  `----> RPM-GPG-KEY-redhat-release
                               --Red Hatನ ಪ್ಯಾಕೇಜುಗಳಿಗೆ GPG ಸಿಗ್ನೇಚರ್ 

/media/cdrom
  |----> Client                       -- ಕೋರ್"knowledgeworker" ಡೆಸ್ಕ್-ಟಾಪಿನ ಬೈನರಿ ಪ್ಯಾಕೇಜುಗಳ
  |        `----> repodata     -- ಅನುಸ್ಥಾಪನೆ ಪ್ರಕ್ರಿಯೆಯಲ್ಲಿ ಉಪಯೋಗಿಸಲಾದ ಈ ಬಿಡುಗಡೆಯ
  |                                Red Hat Enterprise Linuxನ ಬಗೆಗಿನ
  |                               ಮಾಹಿತಿ
  |----> Workstation                 -- ಅಭಿವೃದ್ಧಿ ಮತ್ತು ಇಂಜಿನಿಯರಿಂಗ್ ವರ್ಕ್-ಸ್ಟೇಷನ್ ಆಯ್ಕೆಯ 
  |                               ಬೈನರಿ ಪ್ಯಾಕೆಜುಗಳು
  |        `----> repodata     -- ಅನುಸ್ಥಾಪನೆಯಲ್ಲಿ ಉಪಯೋಗಿಸಲಾದ ವರ್ಕ್-ಸ್ಟೇಷನ್ ಬಗೆಗಿನ ಮಾಹಿತಿ
  |----> VT                       --ವಾಸ್ತವೀಕರಣ ಆಯ್ಕೆಯ ಬೈನರಿ ಪ್ಯಾಕೇಜುಗಳು
  |        `----> repodata     -- ಅನುಸ್ಥಾಪನೆಯಲ್ಲಿ ಉಪಯೋಗಿಸಲಾದ ವಾಸ್ತವೀಕರಣದ ಬಗೆಗಿನ ಮಾಹಿತಿ
  |----> images                -- ಬೂಟ್ CD-ROM ಚಿತ್ರಿಕೆ
  |----> isolinux              -- CDಯಿಂದ ಬೂಟ್ ಮಾಡಲು ಉಪಯೋಗಿಸಲಾದ ಕಡತಗಳು
  |----> README                -- ಈ ಕಡತ
  |----> RELEASE-NOTES         -- Red Hat Enterprise Linux ಈ ಬಿಡುಗಡೆಯ ಬಗೆಗಿನ
  |                               ಇತ್ತೀಚಿನ ಮಾಹಿತಿ 
  `----> RPM-GPG-KEY-redhat-release
                               -- Red Hat ಪ್ಯಾಕೇಜುಗಳಿಗೆ GPG ಸಿಗ್ನೇಚರುಗಳು 

    

ಪ್ರತಿ ಸೋರ್ಸ್ ಕೋಡ್ ಸೀಡಿ-ರಾಂನ ಕೋಶ ರಚನೆಯು ಈ ಕೆಳಗಿನಂತಿರುತ್ತದೆ:


/media/cdrom
  |----> SRPMS                 -- ಆಕರ ಪ್ಯಾಕೇಜುಗಳು
  `----> RPM-GPG-KEY-redhat-release
                               -- Red Hatನ ಪ್ಯಾಕೇಜುಗಳಿಗೆ GPG ಸಿಗ್ನೇಚರ್

    

ನೀವು NFS, FTP, ಅಥವ HTTP ಅನುಸ್ಥಾಪನೆಗಳಿಗಾಗಿ ಅನುಸ್ಥಾಪನ ವೃಕ್ಷವನ್ನು ಹೊಂದಿಸುವಂತಿದ್ದರೆ, ಎಲ್ಲಾ ಕಾರ್ಯವ್ಯವಸ್ಥೆಗಳ ಸೀಡಿ-ರಾಂನ ಕೋಶದಲ್ಲಿರುವ RELEASE-NOTES ಕಡತ ಹಾಗು RedHat ನಿಂದ ಎಲ್ಲಾ ಕಡತಗಳನ್ನು ನಕಲಿಸ ಬೇಕು. ಲಿನಕ್ಸ್ ಮತ್ತು ಯುನಿಕ್ಸ್ ಗಣಕಗಳಲ್ಲಿ, ಈ ಕೆಳಗಿನ ಪ್ರಕ್ರಿಯೆಯು ಪರಿಚಾರಕದ ನಿಗದಿತ ಕೋಶವನ್ನು ಸೂಕ್ತವಾಗಿ ಸಂರಚಿಸುತ್ತದೆ (ಪ್ರತಿ ಸೀಡಿ-ರಾಂಗು ಹೀಗೆಯೆ ಮಾಡಿ):

  1. ಸೀಡಿ-ರಾಂ ಅನ್ನು ತೂರಿಸಿ

  2. mount /media/cdrom

  3. cp -a /media/cdrom/Server <target-directory>

  4. cp /media/cdrom/RELEASE-NOTES* <target-directory> (ಅನುಸ್ಥಾಪನ ಸೀಡಿ ೧ ಮಾತ್ರ)

  5. umount /media/cdrom

(ಇಲ್ಲಿ <target-directory>ಯು ಅನುಸ್ಥಾಪನ ವೃಕ್ಷವನ್ನು ಇರಿಸಲು ಬೇಕಿರುವ ಕೋಶದ ಮಾರ್ಗವನ್ನು ಸೂಚಿಸುತ್ತದೆ.)

ಸೂಚನೆ

ಪೂರಕ ಸೀಡಿ ರಾಂ ಅಥವ ಯಾವುದೇ ಲೇಯರ್ಡ್ ಉತ್ಪನ್ನ ಸೀಡಿ-ರಾಂಗಳನ್ನು ನಕಲಿಸ ಬೇಡಿ, ಏಕೆಂದರೆ ಇದರಿಂದ ಅನಕೊಂಡಾದ ಸರಿಯಾದ ಕಾರ್ಯ ನಿರ್ವಹಣೆಯಲ್ಲಿ ಅಗತ್ಯವಿರುವ ಕಡತಗಳು ಪುನರ್ ಬರೆಯಲ್ಪಡುತ್ತವೆ.

ಈ ಸೀಡಿ-ರಾಂಗಳನ್ನು Red Hat ಎಂಟರ್ಪ್ರೈಸ್ ಲಿನಕ್ಸ್ಅನ್ನು ಅನುಸ್ಥಾಪಿಸಿದ ನಂತರವೇ ಅನುಸ್ಥಾಪಿಸಬೇಕು.

ಅನುಸ್ಥಾಪಿಸುವುದು

ಈಗ ಹೆಚ್ಚಿನ ಗಣಕಗಳು ಸೀಡಿ-ರಾಂಗಳಿಂದ ಸ್ವಯಂಚಾಲಿತವಾಗಿ ಬೂಟ್ ಆಗಬಲ್ಲವು. ನಿಮ್ಮಲ್ಲಿರುವುದು ಅಂತಹ ಗಣಕವಾಗಿದ್ದರೆ, (ಹಾಗು ಅದು ಸೂಕ್ತವಾಗಿ ಸಂರಚಿತವಾಗಿದ್ದಲ್ಲಿ) ನೀವು Red Hat ಎಂಟರ್ಪ್ರೈಸ್ ಲಿನಕ್ಸ್ ನ ಅನುಸ್ಥಾಪನ ಸೀಡಿ ೧ಅನ್ನು ನೇರವಾಗಿ ಬೂಟ್ ಮಾಡಬಹುದು. ಬೂಟಾದ ನಂತರ Red Hat ಎಂಟರ್ಪ್ರೈಸ್ ಲಿನಕ್ಸ್ನ ಅನುಸ್ಥಾಪನ ಪ್ರೋಗ್ರಾಂ ಪ್ರಾರಂಭವಾಗುತ್ತದೆ, ಮತ್ತು ನೀವು ನಿಮ್ಮಗಣಕದಲ್ಲಿ ಸೀಡಿ ರಾಂ ಅನ್ನು ಅನುಸ್ಥಾಪಿಸಲು ಶಕ್ತರಾಗಿರುತ್ತೀರ.

images/ ಕೋಶವು boot.isoಕಡತವನ್ನು ಹೊಂದಿದೆ. ಇದು Red Hat ಎಂಟರ್ಪ್ರೈಸ್ ಲಿನಕ್ಸ್ ಅನುಸ್ಥಾಪನ ಪ್ರೋಗ್ರಾಂ ಅನ್ನು ಬೂಟ್ ಮಾಡುವಲ್ಲಿ ಉಪಯೋಗವಾಗಬಲ್ಲ ISO ಚಿತ್ರಿಕೆ. ಜಾಲಬಂಧ ಆಧರಿತ ಅನುಸ್ಥಾಪನೆಗಳನ್ನು ಪ್ರಾರಂಭಿಸಲು ಇದು ಸೂಕ್ತ. boot.isoಅನ್ನು ಉಪಯೋಗಿಸಲು, ನಿಮ್ಮ ಗಣಕವು ಸೀಡಿ-ರಾಂನಿಂದ ಬೂಟ್ ಮಾಡಲು ಶಕ್ತವಾಗಿರಬೇಕು, ಮತ್ತು ಅದರ BIOS ಸೆಟ್ಟಿಂಗುಗಳು ಸಂರಚಿತವಾಗಿರಬೇಕು. ನೀವು boot.iso ಅನ್ನು ಒಂದು ಬರೆಯಬಲ್ಲ/ಪುನಃಬರೆಯಬಲ್ಲ ಸೀಡಿ-ರಾಂಗೆ ಬರೆಯಬೇಕು.

images/ ಕೋಶದಲ್ಲಿರುವ ಇನ್ನೊಂದು ಚಿತ್ರಿಕಾ ಕಡತವೆಂದರೆ diskboot.img. ಈ ಕಡತವನ್ನು USB ಪೆನ್ ಡ್ರೈವಿನೊಂದಿಗೆ ಉಪಯೋಗಿಸಲು ಅನುಕೂಲವಾಗುವಂತೆ ರಚಿಸಲಾಗಿದೆ (ಅಥವ ಒಂದು ಡಿಸ್ಕೆಟ್ ಚಾಲಕಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ ಇತರ ಯಾವುದೇ ಬೂಟ್ ಮಾಡಬಹುದಾದ ಮಾಧ್ಯಮ). ಈ ಚಿತ್ರಿಕೆಯನ್ನು ಬರೆಯಲು dd ಆಜ್ಞೆಯನ್ನು ಉಪಯೋಗಿಸಿ.

ಸೂಚನೆ

ಈ ಚಿತ್ರಿಕೆಯನ್ನು USB ಪೆನ್ ಡ್ರೈವಿನಿಂದ ಉಪಯೋಗಿಸುವ ಸಾಮರ್ಥ್ಯವು ನಿಮ್ಮ ಗಣಕದ BIOS, USB ಪೆನ್ ಸಾಧನಗಳಿಂದ ಬೂಟ್ ಆಗುವ ಸಾಮರ್ಥ್ಯದ ಮೇಲೆ ನಿರ್ಧರಿತವಾಗಿರುತ್ತದೆ.

ಸಹಾಯವನ್ನು ಪಡೆಯುವುದು

ಅಂತರ್ಜಾಲದ ಸೌಲಭ್ಯವಿರುವವರು, http://www.redhat.comಅನ್ನು ಸಂಪರ್ಕಿಸಿ. ಇನ್ನೂ ನಿಶ್ಚಿತವಾಗಿ ಹೇಳಬೇಕೆಂದರೆ, ಇಲ್ಲಿ ದೊರೆಯುವ ನಮ್ಮ ಮೈಲಿಂಗ್ ಲಿಸ್ಟನ್ನು ನಿಲುಕಿಸಿಕೊಳ್ಳಿ:

http://www.redhat.com/mailing-lists

ನಿಮ್ಮಲ್ಲಿ ಅಂತರ್ಜಾಲ ಸೌಲಭ್ಯವಿಲ್ಲದಿದ್ದರೂ ಸಹ ನೀವು ನಮ್ಮ ಮುಖ್ಯ ಮೈಲಿಂಗ್ ಲಿಸ್ಟಿಗೆ ಚಂದಾದಾರರಾಗಬಹುದು

ಇದಕ್ಕಾಗಿ, subscribe ಎಂಬ ವಿಷಯ ಸಾಲಿನೊಂದಿಗೆ ಒಂದು ಇ ಮೈಲನ್ನುrhelv5-announce@redhat.com ಮತ್ತು rhelv5-beta-list@redhat.com ಗೆ ಕಳುಹಿಸಿ. ಪತ್ರದ ಮುಖ್ಯ ಜಾಗವನ್ನ್ ಖಾಲಿಯಾಗಿಯೇ ಬಿಡಬಹುದು.

Red Hat ಎಂಟರ್ಪ್ರೈಸ್ ಲಿನಕ್ಸ್ @ಆವೃತ್ತಿ@ನ ಕೆಲವೊಂದು ಅಪ್ಡೇಟುಗಳನ್ನು ಬಿಡುಗಡೆ ಟಿಪ್ಪಣಿಗಳ ಈ ಆವೃತ್ತಿಯಲ್ಲಿ ಕಾಣಿಸದೇ ಇರಬಹುದು. ಬಿಡುಗಡೆ ಟಿಪ್ಪಣಿಗಳ ಒಂದು ಅಪ್ಡೇಟಾದ ಆವೃತ್ತಿಯನ್ನು ಈ ಕೆಳಗಿನ URLನಲ್ಲಿಯೂ ಸಹ ಕಾಣಬಹುದು:

http://www.redhat.com/docs/manuals/enterprise/RHEL-5-manual/index.html

ರಫ್ತು ನಿಯಂತ್ರಣ

As required by U.S. law, user represents and warrants that it: (a) understands that certain of the software are subject to export controls under the U.S. Commerce Departments Export Administration Regulations (EAR); (b) is not located in a prohibited destination country under the EAR or U.S. sanctions regulations (currently Cuba, Iran, Iraq, Libya, North Korea, Sudan and Syria); (c) will not export, re-export, or transfer the software to any prohibited destination, entity, or individual without the necessary export license(s) or authorizations(s) from the U.S. Government; (d) will not use or transfer the software for use in any sensitive nuclear, chemical or biological weapons, or missile technology end-uses unless authorized by the U.S. Government by regulation or specific license; (e) understands and agrees that if it is in the United States and exports or transfers the Software to eligible end users, it will, as required by EAR Section 741.17(e), submit semi-annual reports to the Commerce Departments Bureau of Industry & Security (BIS), which include the name and address (including country) of each transferee; and (f) understands that countries other than the United States may restrict the import, use, or export of encryption products and that it shall be solely responsible for compliance with any such import, use, or export restrictions.